ಪೂರ್ವಭಾವಿ ತನಿಖೆ
1 ) ಪೂರ್ವಭಾವಿ ತನಿಖೆ ಯಾಕೆ ಮಾಡುತ್ತಾರೆ?
ಉತ್ತರ:- ನೌಕರನ ಮೇಲೆ ಬರುವ ಅಪಾದನೆಗೆ ನೌಕರನು ತಪ್ಪು ಮಾಡಿದ್ದಾನೋ ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಶಿಸ್ತು ಪ್ರಾಧಿಕಾರವು ಕೈಗೊಳ್ಳುವ ಮೊದಲ ಹಂತವೇ ಪೂರ್ವಭಾವಿ ತನಿಖೆ, ಇಂತಹ ತನಿಖೆಯ ವರದಿಯನ್ನು ಶಿಸ್ತುಪ್ರಾಧಿಕಾರವು ಅವಲೋಕಿಸಿ ನೌಕರನ ವಿರುದ್ಧ ಇಲಾಖಾ ವಿಚರಣೆ ನಡೆಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬೇಕಾಗುತ್ತದೆ.
2) ಪೂರ್ವಭಾವಿ ತನಿಖೆ ಯಾರು ಮಾಡುತ್ತಾರೆ?
ಉತ್ತರ:- ಶಿಸ್ತುಪ್ರಾಧಿಕಾರ ಪೂರ್ವಭಾವಿ ತನಿಕೆಯನ್ನು ಕೈಗೊಳ್ಳುತ್ತದೆ.
3) ಪೂರ್ವಭಾವಿ ತನಿಖೆಯನ್ನು ನೌಕರನಿಗೆ ತಿಳಿಸಬೇಕೆ?
ಉತ್ತರ:- ಇಲ್ಲ, ನೌಕರನ ವಿರುದ್ಧ ಕೇಳಿ ಬಂದ ಅಪಾದನೆ ಕುರಿತು ಗೌಪ್ಯವಾಗಿ ನಡೆಸುವ ಪ್ರಾಥಮಿಕ ತನಿಖೆಯಾಗಿದೆ. ಇದು ಅನೌಪಚಾರಿಕ ಸ್ವಭಾವದ್ದಾಗಿರುತ್ತದೆ.
4) ಪೂರ್ವಭಾವಿ ತನಿಖೆಯಿಂದ ನೌಕರನನ್ನು ದೋಷಮುಕ್ತ/ ಶಿಕ್ಷೆಗೆ ಗುರಿ ಮಾಡಬಹುದೇ?
ಉತ್ತರ:- ಇಲ್ಲ ನೌಕರನ ಮೇಲಿನ ಆರೋಪದ ಬಗ್ಗೆ ಸತ್ಯಾಸತ್ಯತೆ ಕುರಿತು ಕೈಗೊಳ್ಳುವ ತನಿಖೆಯಾಗಿದೆ ಇದನ್ನು ಆಧಾರಿಸಿ ದಂಡನೆ ವಿಧಿಸುವುದಾಗಲೀ, ದೋಷಮುಕ್ತ ಮಾಡುವುದಾಗಲೀ ಬರುವುದಿಲ್ಲ. ನೌಕರನ ಮೇಲೆ ಕೇಳಿ ಬಂದ ಅಪಾದನೆ ಕುರಿತು ಇಲಾಖಾ ವಿಚಾರಣೆ ನಡೆಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಮಾತ್ರ ನಿರ್ಧಾರಿಸಬಹುದಾಗಿರುತ್ತದೆ.
5) ಪೂರ್ವಭಾವಿ ತನಿಖೆ ಮಾಡುವುದು ಕಡ್ಡಾಯವೇ?
ಉತ್ತರ:- ಇಲ್ಲ, ಅಪಾದನೆ ಸಂದೇಹಾತ್ಮಕವಾಗಿದ್ದರೆ ಪೂರ್ವಭಾವಿ ತನಿಖೆ ಕೈಗೊಳ್ಳಬಹುದು, ದೃಡವಾದ ದಾಖಲೆಗಳು ಲಭ್ಯವಿದ್ದರೆ ನೇರವಾಗಿ ಇಲಾಖಾ ವಿಚಾರಣೆ ಕೈಗೊಳ್ಳಬಹುದು.
6) ಪೂರ್ವ ಭಾವಿ ತನಿಖೆಯಲ್ಲಿ ಸಂವಿಧಾನದ ಅನುಚ್ಛೇದ 311(2) ಅನುಸರಿಸಬೇಕೆ?
ಉತ್ತರ:- ಪೂರ್ವಭಾವಿ ತನಿಖೆಯು ಆ ತನಿಖೆಯನ್ನು ನಡೆಸುವ ಅಧಿಕಾರಿಯ ವಿವೇಚನೆ ಒಳಪಟ್ಟಿರುತ್ತದೆ ಮತ್ತು ಅಂತಹ ತನಿಖೆಯು ಸಂವಿಧಾನದ ಅನುಚ್ಛೇದ 311(2) ರಲ್ಲಿರುವ ನಿಯಮವನ್ನು ಪರಿಪಾಲಿಸುವುದಿಲ್ಲ.
7) ಪೂರ್ವಭಾವಿ ತನಿಖೆಯಲ್ಲಿ ನೌಕರನು ಪ್ರತಿವಾದ ಮಂಡಿಸಬಹುದೇ?
ಉತ್ತರ: ಇಲ್ಲ.
8) ಪೂರ್ವಭಾವಿ ತನಿಖೆಯನ್ನು ನೌಕರನ ಎದುರು ನಡೆಸಲಾಗುತ್ತದೆಯೆ?
ಉತ್ತರ:- ಇಲ್ಲ
9) ನೌಕರನ ವಿರುದ್ಧ ದೋಷಾರೊಪಣ ಪಟ್ಟಿ ಜಾರಿಗೊಳಿಸುವಾಗ ಪೂರ್ವಭಾವಿ ತನಿಖಾ ವರದಿಯನ್ನು ಸೇರ್ಪಡೆಗೊಳಿಸಿ ಜಾರಿಗೊಳಿಸಬೇಕೆ?
ಉತ್ತರ:- ಶಿಸ್ತುಪ್ರಾದಿಕಾರವು ಅಪಾದಿತ ನೌಕರನ ವಿರುದ್ಧ ಯಾವುದೇ ಅಪಾದನೆ ಹೊರಸಿ ಅಂತಹ ಅಪಾದನೆ ಪಟ್ಟಿ ಮತ್ತು ಆರೋಪ ವಿಷಯಗಳನ್ನು ಸಮರ್ತಿಸಲು ಪ್ರಸ್ತಾಪವಿರುವಂತಹ ದಸ್ತಾವೇಜು ಪಟ್ಟಿ ಮತ್ತು ಸಾಕ್ಷಿಗಳನ್ನು ಸಂಬಂಧಪಟ್ಟ ದಾಖಲಿಗಳ ಮೇಲೆ ಮಾತ್ರ ತಯಾರಿಸಿ ಒದಗಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಪೂರ್ವಭಾವಿ ವರದಿಯನ್ನು ಸೇರ್ಪಡೆಗೊಳಿಸಬಾರದು.
10) ಪೂರ್ವಭಾವಿ ತನಿಖೆಯ ಆಧಾರದ ಮೇಲೆ ಅಪಾದನೆ ಪಟ್ಟಿ ಸಿದ್ಧಗೊಳಿಸಬೇಕೆ?
ಉತ್ತರ:- ಶಿಸ್ತುಪ್ರಾದಿಕಾರವು ಅಪಾದಿತ ನೌಕರನ ವಿರುದ್ಧ ಯಾವುದೇ ಅಪಾದನೆ ಹೊರಸಿ ಅಂತಹ ಅಪಾದನೆ ಪಟ್ಟಿ ಮತ್ತು ಆರೋಪ ವಿಷಯಗಳನ್ನು ಸಮರ್ತಿಸಲು ಪ್ರಸ್ತಾಪವಿರುವಂತಹ ದಸ್ತಾವೇಜು ಪಟ್ಟಿ ಮತ್ತು ಸಾಕ್ಷಿಗಳನ್ನು ಸಂಬಂಧಪಟ್ಟ ದಾಖಲೆಗಳ ಮೇಲೆ ಮಾತ್ರ ತಯಾರಿಸಬೇಕು.
11) ನೌಕರನಿಗೆ ಅಪಾದನ ಪಟ್ಟಿ ನೀಡಬೇಕೆ?
ಉತ್ತರ:- ಅಗತ್ಯವಾಗಿ, ಒದಗಿಸಬೇಕು.
12) ಪೂರ್ವಭಾವಿ ತನಿಖೆ ಕುರಿತು ಯಾವುದಾದರು ಸರ್ಕಾರಿ ಆದೇಶ ಇದೆಯೇ?
ಉತ್ತರ:- ಹೌದು, ಕಂಡಿತ ಇದೆ, ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಅಸುಇ 09 ಸೇಇವಿ 86, ದಿನಾಂಕ: 05.06.1986 ರಲ್ಲಿ ಈ ಬಗ್ಗೆ ತಿಳಿಸಿಕೊಡಲಾಗಿದೆ.
No comments:
Post a Comment