TIME BOND ORDERS
ವಾರ್ಷಿಕ ವೇತನ ಬಡ್ತಿ
ದೋಷಾರೋಪಣೆ/ಇಲಾಖೆ ವಿಚಾರಣೆ ಜಾರಿಯಲ್ಲಿದೆ ಎಂದ ಮಾತ್ರಕ್ಕೆ ವಾರ್ಷಿಕ ವೇತನ ಬಡ್ತಿ ತಡೆಹಿಡಿಯಬಹುದೇ?
ನೌಕರನ ವಿರುದ್ಧ ದೋಷಾರೋಪಣೆ / ಇಲಾಖಾ ವಿಚಾರಣೆ ಜಾರಿಯಲ್ಲಿದ್ದರೆ ಅವನ ಮುಂಬಡ್ತಿಯನ್ನು ಮುಚ್ಚಿದ ಲಕೋಟೆಯಲ್ಲಿಡಬಹುದು ವಿನಃ ವಾರ್ಷಿಕ ವೇತನ ಬಡ್ತಿ ತಡೆಯಿಡಿಯಲು ಸಾಧ್ಯವಿಲ್ಲ...
ಒಂದು ವೇಳೆ ಆ ನೌಕರನನ್ನು ಶಿಸ್ತುಪ್ರಾಧಿಕಾರವು ಅಮಾನತ್ತುಗೊಳಿಸಿದ್ದರೆ ಆ ಅಮಾನತ್ತು ಅವಧಿಯನ್ನು ಕರ್ತವ್ಯದ ಅವಧಿ ಎಂದು ಪಡಿಗಣಿಸಿದ್ದರೆ ಆಗ ವಾರ್ಷಿಕ ವೇತನ ಬಡ್ತಿ ಸಿಗಬೇಕಾದ ದಿನವೇ ಸಿಗುತ್ತದೆ.
ಒಂದು ವೇಳೆ ಅಮಾನತ್ತು ಅವಧಿಯನ್ನು ಇತ್ಯರ್ಥ ಪಡಿಸಿಲ್ಲವಾದರೆ ಅಥವಾ ಅಮಾನತ್ತು ಅವಧಿಯನ್ನು ಅಮಾನತ್ತು ಎಂದೇ ಪರಿಗಣಿಸಿದ್ದರೆ ಆಗ ಆ ನೌಕರನ ವಾರ್ಷಿಕ ವೇತನ ಬಡ್ತಿ ಅಮಾನತ್ತುಗೊಂಡ ಅಷ್ಟು ದಿನಗಳ ಕಾಲ ಮುಂದೂಡಬೇಕು. ಆ ನಂತರದ ದಿನಾಂಕವನ್ನು ವಾರ್ಷಿಕ ವೇತನ ಬಡ್ತಿ ದಿನಾಂಕವಾಗಿ ಪರಿಗಣಿಸಿ ವಾರ್ಷಿಕ ವೇತನ ಬಡ್ತಿಯನ್ನು ನೀಡಬೇಕು.
ಕರ್ನಾಟಕ ನಾಗರೀಕ ಸೇವಾ ನಿಯಮ 1958ರ ನಿಯಮ 51 ರಲ್ಲಿ ವಾರ್ಷಿಕ ವೇತನ ಬಡ್ತಿಯ ಬಗ್ಗೆ ತಿಳಿಸಿಕೊಡಲಾಗಿದೆ. ವಾರ್ಷಿಕ ವೇತನ ಬಡ್ತಿ ಪಡೆಯಲು ಇರುವ ಸೇವಾ ಷರತ್ತುಗಳಲ್ಲಿ ದೋಷಾರೋಪಣೆ/ಇಲಾಖಾ ವಿಚಾರಣೆ ಜಾರಿಯಲ್ಲಿದ್ದರೆ ತಡೆಯಿಡಿಯವ ಷರತ್ತು ಇರುವುದಿಲ್ಲ.
ವಾರ್ಷಿಕ ವೇತನ ಬಡ್ತಿಗೆ ಇರುವ ಷರತ್ತುಗಳೇ ಬೇರೆ, ಹುದ್ದೆಯಲ್ಲಿ ಮುಂಬಡ್ತಿ ಪಡೆಯುವ ಬಗ್ಗೆ ಇರುವ ಷರತ್ತುಗಳೇ ಬೇರೆಯಾಗಿವೆ.
ವೇತನ ಬಡ್ತಿ ನೌಕರನಿಗೆ ಯಾವಾಗ ಸಿಗುತ್ತದೆ?
ವೇತನ ಬಡ್ತಿಯು ಅದನ್ನು ಗಳಿಸಿದ (earned) ದಿನದ ಮರುದಿನ ದಿಂದ ಅನ್ವಯವಾಗುತ್ತದೆ. ವಾರ್ಷಿಕ ವೇತನ ಬಡ್ತಿಯ ದಿನಾಂಕವನ್ನು ಒಂದೇ ಕ್ರಮದಲ್ಲಿ ನಿಗದಿಪಡಿಸಬಹುದೇ?
ವೇತನ ಬಡ್ತಿಯನ್ನು, ಅದನ್ನು ತಡೆಹಿಡಿಯದಿದ್ದ ಹೊರತು ಯಥಾಕ್ರಮದಲ್ಲಿ ನೌಕರನು ನೇಮಕಾತಿ ಹೊಂದಿದ ದಿನಾಂಕದಂದೇ ಅಥವಾ ಮುಂಬಡ್ತಿಗೊಂಡಾಗ ನಿಗದಿಪಡಿಸಿದ ದಿನಾಂಕದಂದೇ ಪ್ರತಿ ವರ್ಷ ವಾರ್ಷಿಕ ವೇತನ ಒಂದೇ ಕ್ರಮದಲ್ಲಿ ಪಡೆಯಬಹುದು. ಪ್ರಸ್ತುತ ನೌಕರನಿಗೆ ಲಾಭ ಆಗುವಂತೆ ಜನವರಿ ಮತ್ತು ಜುಲೈ ನ 1ನೇ ತಾರೀಕಿನಿಂದ ವೇತನ ಬಡ್ತಿ ನೀಡಲಾಗುತ್ತಿದೆ.
ನೌಕರನ ವಾರ್ಷಿಕ ವೇತನ ಬಡ್ತಿ ಯಾವಾಗ ತಡೆಯಿಡಿಯಬಹುದು?
ಸರ್ಕಾರಿ ನೌಕರನ ನಡತೆಯು ಸರಿಯಾಗಿರದಿದ್ದರೆ ಅಥವಾ ಅವನ ಕಾರ್ಯವು ತೃಪ್ತಿಕರವಾಗಿರದಿದ್ದರೆ ಅವನ ವೇತನಬಡ್ತಿಯನ್ನು ತಡೆಹಿಡಿಯಲು ಆದೇಶ ಮಾಡುವ ಬಗ್ಗೆ ಇರುವ ನಿಯಮಗಳಿಗನುಸಾರವಾಗಿ ಸಕ್ಷಮ ಅಧಿಕಾರಿಯು ಅವನ ವೇತನಬಡ್ತಿಯನ್ನು ತಡೆಹಿಡಿಯಬಹುದು.
ಹೀಗೆ ವೇತನ - ಬಡ್ತಿಯನ್ನು ತಡೆಹಿಡಿಯುವ ಆದೇಶ ಮಾಡುವಾಗ ತಡೆಹಿಡಿಯುವ ಅಧಿಕಾರಿಯು - ಅದನ್ನು ಯಾವ ಅವಧಿಯವರೆಗೆ ತಡೆಹಿಡಿಯಲಾಗಿದೆ ಮತ್ತು ಹಾಗೆ ಅದನ್ನು ಮುಂದೂಡಿರುವುದು ಮುಂದಿನ ವೇತನ ಬಡ್ತಿಗಳನ್ನು ಮುಂದೂಡುವ ಪರಿಣಾಮ ವುಳ್ಳದ್ದಾಗಿದೆಯೇ ಎಂಬುದನ್ನು ವಿವರಿಸತಕ್ಕುದು.
- 10-15 YEARS TIME BOND ORDERS - CLICK HERE
- 15 YEARS SPL PRAMOTION TIME BOND ORDERS - CLICK HERE
- 20 YEARS TIME BOND ORDERS - CLICK HERE
- 25 -30 YEARS TIME BOND ORDERS - CLICK HERE
- TIME BOND RELATED ORDERS - CLICK HERE
15 YEARS WORD DOCUMENTS - CLICK
No comments:
Post a Comment