SATS ನಲ್ಲಿ ಆಧಾರ್ ವೆರಿಫಿಕೇಶನ್ ಮಾಹಿತಿ



ಪ್ರಶ್ನೆ: 1 ಮಗುವಿನ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರದಲ್ಲಿ ಹೆಸರು ವ್ಯತ್ಯಾಸವಿದ್ದಲ್ಲಿ ಶಾಲಾ ದಾಖಲಾತಿಯಲ್ಲಿ ಯಾವುದನ್ನು ನಮೂದು ಮಾಡಬೇಕು?

ಪೋಷಕರನ್ನು ಕರೆಸಿ ಅವರಲ್ಲಿ 2 ದಾಖಲೆಗಳು ಪೈಕಿ ಯಾವ ದಾಖಲೆ ಸರಿ ಇದೆ ಎಂದು ಕೇಳಿ ದಾಖಲು ಮಾಡುವುದು.‌ ಸರಿ ಇಲ್ಲದ ದಾಖಲೆಯನ್ನು ತಿದ್ದುಪಡಿ ಮಾಡಿ ತರುವಂತೆ ಸೂಚಿಸಿ. ಪೋಷಕರ ಸಭೆಯಲ್ಲಿ ಮಕ್ಕಳ ಶಾಲಾ ದಾಖಲಾತಿ ಮಾಹಿತಿ, ಜನನ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್ ದಾಖಲೆ ಒಂದೇ ರೀತಿ ಇರುವಂತೆ ಮಾರ್ಗದರ್ಶನ ಮಾಡಿ.

ಪ್ರಶ್ನೆ: 2 ಪ್ರಸ್ತುತ 1 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಗುವಿನ ದಾಖಲಾತಿ ಪುಸ್ತಕದಲ್ಲಿ ತಿದ್ದುಪಡಿ ಮಾಡುವುದು ಹೇಗೆ?

ಪೋಷಕರ ಬದಲಾಗಬೇಕಾದ ಮಾಹಿತಿ ಬಗ್ಗೆ‌ ನೋಟರಿ ಮೂಲಕ ಮುಖ್ಯ ಶಿಕ್ಷಕರಿಗೆ ಮನವಿ ಸಲ್ಲಿಸಬೇಕು ಹಾಗೂ ಪೂರಕವಾಗಿ ಸರಿ ಇರುವ ಆಧಾರ್ ಕಾರ್ಡ್ ಅಥವಾ ಜನನ ಪ್ರಮಾಣ ಪತ್ರ ಪ್ರತಿಯನ್ನು ನೀಡಬೇಕು. ಇದನ್ನು ಪಡೆದ ಮುಖ್ಯ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ‌ ತಿದ್ದುಪಡಿ ಅನುಮತಿ ನೀಡುವಂತೆ ಕೋರಿಕೆ ಸಲ್ಲಿಸಬೇಕು. ಕೋರಿಕೆ‌ ಸಲ್ಲಿಸುವಾಗ 1ನೇ ತರಗತಿಯಿಂದ ಪ್ರಸ್ತುತ ಮಗು ವ್ಯಾಸಂಗ ಮಾಡುತ್ತಿರುವ ತರಗತಿಯವರೆಗೆ ದಾಖಲೆ ಬದಲಾವಣೆ ಮಾಡಲು ಕೋರಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ಪಡೆದ ನಂತರ ದಾಖಲಾತಿ ವಹಿ ಹಾಗೂ ಇತರ ವಹಿಗಳನ್ನು ತಿದ್ದುಪಡಿ ಮಾಡಬೇಕು. ಹಾಗೂ ದಾಖಲಾತಿ ವಹಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ‌ ಸಹಿಯನ್ನು ಪಡೆಯಬೇಕು.

ಪ್ರಶ್ನೆ : 3 ವಿದ್ಯಾಭ್ಯಾಸ ಪೂರ್ಣ ಗೊಳಿಸಿದ ವಿದ್ಯಾರ್ಥಿಗಳು ಅಗತ್ಯ ತಿದ್ದುಪಡಿಯನ್ನು ಮಾಡಲು ಏನು ಕ್ರಮ ಕೈಗೊಳ್ಳಬೇಕು?

ಪ್ರಸ್ತುತ 1-10ನೇ ತರಗತಿಯಲ್ಲಿ ವ್ಯಾಸಂಗ ಮಾಡದ ಈಗಾಗಲೇ ವಿದ್ಯಾಭ್ಯಾಸ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಅಥವಾ ಸಾರ್ವಜನಿಕರಾಗಿದ್ದಲ್ಲಿ ಅಗತ್ಯ ತಿದ್ದುಪಡಿಗೆ ನ್ಯಾಯಾಲಯದಿಂದ ಡಿಕ್ರಿ ಮಾಡಿಸಿ ಶಾಲೆಗೆ‌ ನೀಡಬೇಕು. ಹಾಗೂ ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ‌ಮುಖ್ಯ ಶಿಕ್ಷಕರು ಪಡೆಯಬೇಕು.

ಪ್ರಶ್ನೆ: 4 ಉದಾ: ಪ್ರಸ್ತುತ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯು ದಾಖಲೆ ತಿದ್ದುಪಡಿಗೆ‌ ಯಾರಿಗೆ ಅರ್ಜಿ ಸಲ್ಲಿಸಬೇಕು?

1ನೇ ತರಗತಿಗೆ‌ ದಾಖಲಾದ ಶಾಲೆಯ ಮುಖ್ಯ ಶಿಕ್ಷಕರಿಗೆ‌ ಸಲ್ಲಿಸಬೇಕು. ತಿದ್ದುಪಡಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ಪಡೆಯುವಾಗ 1 ರಿಂದ 9ನೇ ತರಗತಿ ಎಂದು ನಮೂದು ಮಾಡಿ ಅನುಮತಿ ಪತ್ರದ ಪ್ರತಿಯನ್ನು ಮಗು ವ್ಯಾಸಂಗ ಮಾಡಿದ ಎಲ್ಲಾ‌ ಶಾಲೆಗಳಿಗೂ ನೀಡಿ ಮಾಹಿತಿಯನ್ನು ಬದಲಾಯಿಸಿಕೊಳ್ಳಬೇಕು.

ಪ್ರಶ್ನೆ : 5 ಶಾಲಾ ದಾಖಲಾತಿಯಲ್ಲಿ ಮಗುವಿನ ಹೆಸರು ಸರಿಯಿದ್ದು SATS ನಲ್ಲಿ ತಪ್ಪಿದ್ದರೆ ಸರಿಪಡಿಸುವುದು ಹೇಗೆ?

Update student detail ನಲ್ಲಿ ಮಗುವಿನ ಹೆಸರು, ತಂದೆಯ ಹೆಸರು, ತಾಯಿಯ ಹೆಸರು ‌ಮತ್ತು ಜನನ ದಿನಾಂಕದ 50% ತಿದ್ದುಪಡಿ ಮಾಡಲು ಅವಕಾಶವಿದೆ. ಇದು ಸಾಧ್ಯವಾಗದಿದ್ದರೆ DDPI ಲಾಗಿನ್ ಸಂಪರ್ಕಿಸಿ ಎಂಬ ಸಂದೇಶ ಬಂದರೆ SATS HELP ನಲ್ಲಿ ದೂರು ದಾಖಲಿಸಬೇಕು. ದೂರು ದಾಖಲಿಸುವಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ‌ ಮನವಿ ಪತ್ರ ಮತ್ತು ಗುರುತಿನ ದಾಖಲೆ ಅಪ್ಲೋಡ್ ಮಾಡಬೇಕು. ದೂರು ದಾಖಲಿಸಿದ ನಂತರ ಅದನ್ನು ತಾಲೂಕು ‌ಹಂತಕ್ಕೆ ಫಾರ್ವರ್ಡ್ ಮಾಡಬೇಕು.

ಪ್ರಶ್ನೆ : 6 ಮಗುವಿನ ಇತರೇ ಮಾಹಿತಿಗಳನ್ನು SATS ನಲ್ಲಿ ಬದಲಾಯಿಸುವುದು ‌ಹೇಗೆ?

ಮಗುವಿನ ಹೆಸರು, ತಂದೆಯ ಹೆಸರು ತಾಯಿಯ ಹೆಸರು ಮತ್ತು ಜನನ ದಿನಾಂಕದ 50% ತಿದ್ದುಪಡಿ ಮಾಡಲು ಶಾಲಾ ಲಾಗಿನ್ ನಲ್ಲಿ ಅವಕಾಶ ನೀಡಲಾಗಿದೆ. ಈ 4ನ್ನು ಹೊರತುಪಡಿಸಿ ಉಳಿದ ಮಾಹಿತಿಗಳನ್ನು‌ ಜುಲೈ ನಿಂದ ಮಾರ್ಚ್ ತಿಂಗಳುಗಳ ‌ನಡುವೆ ಯಾವಾಗ ‌ಬೇಕಾದರೂ ತಿದ್ದುಪಡಿ ಮಾಡಲು ಅವಕಾಶ ಶಾಲಾ ಲಾಗಿನ್ ನಲ್ಲಿ Update student details ನಲ್ಲಿ ಆಪ್ಶನ್ ಲಭ್ಯವಿದೆ.

ಹಣ ವರ್ಗಾವಣೆ ಸರ್ಕಾರದ ಸೌಲಭ್ಯಗಳ ವರ್ಗಾವಣೆ ಮಾಡುವ ವಿಧಾನ. DIRECT BENEFIT TRANSFER.

ಪ್ರಶ್ನೆ : 7 DBT ಹೇಗೆ ಕಾರ್ಯನಿರ್ವಹಿಸುತ್ತದೆ?

ಡಿಬಿಟಿ ಸೌಲಭ್ಯಕ್ಕಾಗಿ ವ್ಯಕ್ತಿಯು Annexure 1 ರಲ್ಲಿ ತನ್ನ ಖಾತೆಗೆ ಆಧಾರ್ ಸಂಖ್ಯೆ ಸೀಡ್ ಮಾಡುವಂತೆ ಬ್ಯಾಂಕ್ ಗೆ ಕೋರಿಕೆ‌ ಸಲ್ಲಿಸಬೇಕು. ಬ್ಯಾಂಕ್ ‌ಸಿಬ್ಬಂದಿಗಳು ಈ ನಮೂನೆಯ ಪ್ರಕಾರ ವ್ಯಕ್ತಿಯ ಆಧಾರ್ ಮಾಹಿತಿಯನ್ನು National Payments Corporation Of India NPCI ಗೆ‌ ಅಪ್ಲೋಡ್ ಮಾಡಬೇಕು. 2-3 ದಿನಗಳಲ್ಲಿ ವ್ಯಕ್ತಿಯ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಸೀಡ್ ಆಗುತ್ತದೆ.

ಪ್ರಶ್ನೆ : 8 DBT STATUS ಏಕೆ ವಿಫಲವಾಗುತ್ತದೆ?

ಹೆಚ್ಚಿನ ಬ್ಯಾಂಕ್ ಗಳಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿರುತ್ತಾರೆ. ಆದರೆ ಸೀಡ್ ಮಾಡಿರುವುದಿಲ್ಲ. ಆಧಾರ್ ಲಿಂಕ್ ಮಾಡುವ ವಿಧಾನಕ್ಕೂ ಆಧಾರ್ ಸೀಡ್ ಮಾಡುವ ವಿಧಾನಕ್ಕೂ ವ್ಯತ್ಯಾಸವಿದೆ. DBT ಸರಿಯಾಗಬೇಕಾದರೆ ಬ್ಯಾಂಕ್ ನವರು ವ್ಯಕ್ತಿಯ ಖಾತೆಗೆ NPCI ಮೂಲಕ ಆಧಾರ್ ಮಾಹಿತಿಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

ಪ್ರಶ್ನೆ : 9 ಆಧಾರ್ ಸೀಡಿಂಗ್ ಅಥವಾ DBT ವಿಫಲವಾಗಲು ಇತರೇ ಕಾರಣಗಳೇನು?

ಮಗುವಿಗೆ 5 ವರ್ಷ ವಯಸ್ಸಾದಾಗ ನಂತರ ಆಧಾರ್ ಗೆ THUMB ಅಪ್ಡೇಟ್ ಆಗದಿರುವುದು.

ಬ್ಯಾಂಕ್ ಖಾತೆ ಬಳಸದೇ‌ ನಿಷ್ಕ್ರಿಯ ಆಗಿರುವುದು.

ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ನಲ್ಲಿ ಹೆಸರು ವ್ಯತ್ಯಾಸವಿರುವುದು.

ಪ್ರಶ್ನೆ : 10 ಅಕ್ಷರ ದಾಸೋಹ DBT ಪಟ್ಟಿಯಲ್ಲಿ ಕೆಲವು ಮಕ್ಕಳ ಹೆಸರು ಏಕೆ‌ ಕಾಣಿಸುತ್ತಿಲ್ಲ?

SATS ನಲ್ಲಿ ಮಗುವಿನ ಆಧಾರ್ ಸಂಖ್ಯೆ ನಮೂದು ಮಾಡದಿರುವುದು. ನಮೂದು ಮಾಡಿದ ನಂತರ ಸ್ವಲ್ಪ ದಿನ ಕಾಯುವುದು.

ಪ್ರಶ್ನೆ : 11 ಅಕ್ಷರ ದಾಸೋಹ DBT ಒಂದು ಬಾರಿ VERIFY ಮಾಡಿದ ನಂತರವೂ ಮಗುವಿನ ಹೆಸರಿನ ಮುಂದೆ VERIFY ಎಂದೇ ಇದೆ ಏಕೆ?

ಒಂದು ಬಾರಿ ಮಾತ್ರ VERIFY ಆಪ್ಶನ್ ಬಳಸಿ. 2 ಬಾರಿ VERIFY ಮಾಡಬೇಡಿ. SATS-MDM ನಲ್ಲಿ ಮಾಹಿತಿ ಅಪ್ಡೇಟ್ ಆಗುವವರೆಗೂ ಕಾಯಿರಿ. Fail ಬಂದರೆ ಮಾತ್ರ ಆಧಾರ್ ಸೀಡಿಂಗ್ ಮಾಡಿಸಿ 

      ABOUT  VIDEO LINK  - CLICK HERE

                                                                Babahiremani.blogspot.com

1 comment: